Saturday, January 17, 2015

"ಗೆಜ್ಜೆ - ಹೆಜ್ಜೆ"

ಜಗದಲ್ಲಿ ಎಲ್ಲರದು ಮುನ್ನೋಟ - ಮುಂದೋಟ
ನನ್ನ ಜೊತೆಯಲಿ ಬರುವ ಗೆಳೆಯರಿಲ್ಲ ||
ಓಡುವರು-ನಡೆವವರು ಅವರಷ್ಟಕವರಿರಲಿ
ಮುನ್ನೆಡೆವ ದಾರಿಯಲಿ ಆಸಕ್ತಿ ಇಲ್ಲ. || 1 ||

ಹೊರಟಿರುವ ಯಾತ್ರೆಯಿದು ರಾಮ-ಕೃಷ್ಣರ ಜೊತೆಗೆ
ನಾಳೆಯಾ ಚಿಂತೆ ನನ್ನಲ್ಲಿ ಇಲ್ಲ. ||
ಬಂಧನವ ಕಳೆವ ನಿಜ ಅಂಬಿಗನೆ ಜೊತೆಯಿರಲು
ಚಂದದಲಿ ಕಾಯುವನು ಆತಂಕ ಸಲ್ಲ. || 2 ||

ನೋವಿಹುದು ನಲಿವಿಹುದು ಚೆಲ್ಲಾಟವಿಹುದಿಲ್ಲಿ
ಹೊಡೆದಾಟ ಬಡಿದಾಟ ಎಲ್ಲ ಇಹುದು ||
ಬಿಚ್ಚಿಡಲು ಹೊರಟಿರುವೆ ಸತ್ವವಿಹ ಸರಮಾಲೆ
ನೀವುಗಳು ನನ್ನ ಜೊತೆ ಸೇರಬಹುದು ||3||

ಹೊರಟಿರುವೆ ನಾನಿಂದು ಹಿಮ್ಮುಖದ ದಾರಿಯಲಿ
ಬರುವಿರಾ ಜೊತೆಯಲ್ಲಿ ನಾಲ್ಕು ಹೆಜ್ಜೆ ||
ನಮ್ಮ ಪಯಣವು ನಿತ್ಯ ರಾಮ-ಕೃಷ್ಣರ ಜೊತೆಗೆ
ಕುಣಿಯೋಣ ಬನ್ನಿರೈ ಕಟ್ಟಿ ಗೆಜ್ಜೆ ! ||4||

ಸುರೇಖಾ ಭಟ್, ಭೀಮಗುಳಿ
17.01.2015

No comments:

Post a Comment