Wednesday, January 14, 2015

"ಪದ್ಯ - ಗದ್ಯ"

ನಾಲ್ಕಾರು ನಿಯಮಗಳ ಬಿಡದೆ ಪಾಲಿಸಬೇಕು
ಜಗಣ ಗುರು ಲಘುವೆಡೆಗೆ ಗಮನ ಬೇಕು ||
ಬಿಟ್ಟರೊಲಿಯದು ಪದ್ಯ - ಗದ್ಯಕದು ಹಾಗಿಲ್ಲ
ಛಂದಸ್ಸು-ಮಾತ್ರೆಗಳ ಚಿಂತೆಯಿಲ್ಲ ||1||

ನಿಯಮಗಳ ಹಂಗಿಲ್ಲ ನನ್ನ ಗದ್ಯದ ಹದಕೆ
ಮನದಲುಕ್ಕುವ ಭಾವ ಕಕ್ಕುವುದಕೆ ||
ಕಣ್ಣು ಹಾಯಿಸಿರೊಮ್ಮೆ ನನ್ನ ಗದ್ಯದ ಕಡೆಗೆ
ಸಾಹಿತ್ಯ ಹಿತತಾನೆ ನಮ್ಮಮ್ಮಗೆ ||2||


ಸುರೇಖಾ ಭಟ್, ಭೀಮಗುಳಿ
14.01.2015

No comments:

Post a Comment