ಓ ಗಂಡಸೇ.... ನೀನೆಷ್ಟು ಒಳ್ಳೆಯವನು..... ನೊಂದಿರುವ ನಿನಗಾಗಿಯೇ ಈ ಪದ್ಯವನ್ನು ಬರೆದೆ.... ನಿನ್ನ ಸ್ವಂತ(?) ಹೆಂಡತಿಯೇ ನಿನಗಾಗಿ ಈ ಹಾಡನ್ನು ಹಾಡುವಂತಾಗಲಿ ಎಂಬ ಆಶಯ ನನ್ನ ಮನದಲ್ಲಿ ....................
" ಸಾಂತ್ವನ "
----------------
ನನ್ನ ಬೇಗುದಿಯನ್ನು ಕೇಳುವವರಾರಿಲ್ಲ
ಎಂದು ನೀ ನೋಯದಿರು ಮನದ ಒಳಗೆ ||
ನಿನ ನೋವುಗಳಿಗೆಲ್ಲ ಕಿವಿಯಾಗ ಬಲ್ಲೆ ನಾ
ಬಿಚ್ಚಿಟ್ಟು ಹಗುರಾಗು ಅರ್ಧ ಘಳಿಗೆ || ೧ ||
ನಿನ್ನ ಸಂಕಟಕೆಲ್ಲ ಕಾರಣವು ನಾನಲ್ಲ
ಅವುಗಳಿಗೆ ಪರಿಹಾರ ನಾನು ಕಾಣೆ ||
ನೋವುಗಳ ಮನದಲ್ಲೇ ಕಟ್ಟಿ ಹಾಕುವೆಯೇಕೆ ?
ಇರುವೆನಾ ನಿನ್ನೊಡನೆ ದೇವರಾಣೆ || ೨ ||
ಹೊಂಬೆಳಕು ಮೂಡುವುದು ಕತ್ತಲೆಯ ನಂತರದಿ
ಸಂಕಟವ ಸರಿಸುವುದು ಸುಖದ ಕನಸು ||
ಕಾಯೋಣ ತಾಳ್ಮೆಯಲಿ ಆ ದೈವನಣತಿಯಲಿ
ಕುಗ್ಗದಿರಲೆಂದೆಂದು ನಿನ್ನ ಮನಸು || ೩ ||
ದುಃಖ ದುಮ್ಮಾನಗಳು ನಿನ್ನ ಕೊಲ್ಲುತ್ತಿಹವು
ಅರ್ಥವಾಗದು ನನಗೆ ನಿನ್ನ ಮೌನ ||
ನೀ ಹೇಳದೆ ಹೇಗೆ ಅರಿತುಕೊಳ್ಳುವೆ ನಾನು ?
ಬೇಕೊ ಬೇಡವೊ ಹೇಳು ನನ್ನ ಸಾಂತ್ವನ ? || ೪ ||
- ಸುರೇಖಾ ಭೀಮಗುಳಿ
06/01/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
" ಸಾಂತ್ವನ "
----------------
ನನ್ನ ಬೇಗುದಿಯನ್ನು ಕೇಳುವವರಾರಿಲ್ಲ
ಎಂದು ನೀ ನೋಯದಿರು ಮನದ ಒಳಗೆ ||
ನಿನ ನೋವುಗಳಿಗೆಲ್ಲ ಕಿವಿಯಾಗ ಬಲ್ಲೆ ನಾ
ಬಿಚ್ಚಿಟ್ಟು ಹಗುರಾಗು ಅರ್ಧ ಘಳಿಗೆ || ೧ ||
ನಿನ್ನ ಸಂಕಟಕೆಲ್ಲ ಕಾರಣವು ನಾನಲ್ಲ
ಅವುಗಳಿಗೆ ಪರಿಹಾರ ನಾನು ಕಾಣೆ ||
ನೋವುಗಳ ಮನದಲ್ಲೇ ಕಟ್ಟಿ ಹಾಕುವೆಯೇಕೆ ?
ಇರುವೆನಾ ನಿನ್ನೊಡನೆ ದೇವರಾಣೆ || ೨ ||
ಹೊಂಬೆಳಕು ಮೂಡುವುದು ಕತ್ತಲೆಯ ನಂತರದಿ
ಸಂಕಟವ ಸರಿಸುವುದು ಸುಖದ ಕನಸು ||
ಕಾಯೋಣ ತಾಳ್ಮೆಯಲಿ ಆ ದೈವನಣತಿಯಲಿ
ಕುಗ್ಗದಿರಲೆಂದೆಂದು ನಿನ್ನ ಮನಸು || ೩ ||
ದುಃಖ ದುಮ್ಮಾನಗಳು ನಿನ್ನ ಕೊಲ್ಲುತ್ತಿಹವು
ಅರ್ಥವಾಗದು ನನಗೆ ನಿನ್ನ ಮೌನ ||
ನೀ ಹೇಳದೆ ಹೇಗೆ ಅರಿತುಕೊಳ್ಳುವೆ ನಾನು ?
ಬೇಕೊ ಬೇಡವೊ ಹೇಳು ನನ್ನ ಸಾಂತ್ವನ ? || ೪ ||
- ಸುರೇಖಾ ಭೀಮಗುಳಿ
06/01/2016
ಚಿತ್ರ : ಅಂತರ್ಜಾಲ
ನನ್ನ " ಭಾವ ಭಿತ್ತಿ " ಪುಟಕ್ಕೆ ಸ್ವಾಗತ......
https://www.facebook.com/surekha.bheemaguli
No comments:
Post a Comment